ಬಸ್ ಸ್ಟಾಂಡ್...
actually ನಾನವತ್ತು ಸಿಕ್ಕಾಪಟ್ಟೆ confusion ಅಲ್ಲಿದ್ದೆ,
life ಅಲ್ಲಿ ಮೊಟ್ಟ ಮೊದಲಬಾರಿಗೆ serious ಆಗಿ ಸಾಯಬೇಕು ಅಂತ ಮನಸು ಹಠ ಮಾಡಿದರೂ ಬುದ್ಧಿ ಬದುಕಿನ ಬುದ್ಧಿವಾದ ಹೇಳೋದ್ರಲ್ಲೇ busy ಆಗಿತ್ತು,,,
ಆದ್ರೆ, ನನ್ನ ಕಿತಾಪತಿ ಕಣ್ಣುಗಳು ದೃಷ್ಟಿ ಮಾತ್ರ ನಂಗೂ ಇದಕ್ಕೂ ಸಂಬಂಧ ಇಲ್ವೆನೋ ಅನ್ನೋ ಹಾಗೆ ಬಸ್ಸಿನ ಕಿಟಕಿಯಿಂದ ಬಸ್ ಸ್ಟಾಂಡ್ ಪ್ರಪಂಚ ನೋಡ್ತಾ ಕಳೆದು ಹೋಗಿತ್ತೇನೋ ಗೊತ್ತಿಲ್ಲ...
ಯಾವಗಲೋ ಓದಿದ್ದ ನೆನಪು ಕಣ್ಣಿಗೂ ಮನಸಿಗೂ ಸಂಬಂಧ ಇದೆ , ಮನಸ್ಸು ಹೇಳೋ ಮಾತುಗಳು ಕಣ್ಣಲ್ಲಿ ಪ್ರತಿಧ್ವನಿಸುತ್ತೆ ಅಂತ,, ಆದ್ರೆ ಏನೋ ಗೊತ್ತಿಲ್ಲ ನನ್ನ ಕಣ್ಣುಗಳು ಮಾತ್ರ ಯಾವತ್ತೂ ನನ್ನ ಮಾತು ಕೇಳೋದೆ ಇಲ್ಲಪ್ಪ....
ಕ್ಲಾಸ್ ಅಲ್ಲಿ ಬೇಡ ಅಂತ ಎಷ್ಟೇ ಬೇಡಿಕೊಂಡರು ನಿದ್ರಾದೇವಿ ಹಿಂದೆ ಓಡೋದು, ಐಸ್ ಕ್ರೀಮ್ ಕಂಡ್ರೆ ಸಾಕು ಐಸ್ ಕ್ರೀಮ್ ಪಾರ್ಲರ್ ಅವನು ಉದ್ಧಾರ ಆಗ್ಲಿ ಅಂತ ಕಾಯ್ತಾ ಇರುತ್ತವೆ ಅಂದ್ರೆ ತಪ್ಪಿಲ್ಲ, ಅಪ್ಪಿ ತಪ್ಪಿ ನಮ್ ಹುಡುಗ ಕಾಣೋದೆ ತಡ ಫಸ್ಟ್ ಟೈಮ್ ಮಗು ಚಂದಮಾಮನ ನೋಡಿದ ಹಾಗೆ ನೋಡೋದು ,,
ಅಂತದ್ರಲ್ಲಿ ಸಾಯೋ ನಿರ್ಧಾರ ಬೇರೆ ಮಾಡಿದ್ದೆ ಕೊನೆಯ ದಿನ ಅಂತ ಬಸ್ ಸ್ಟಾಂಡ್ ನ ಗಂಭೀರವಾಗಿ ಗಮನಿಸಿ ಸೀಕ್ರೆಟ್ ಆಗಿ good bye ಹೇಳ್ತಾ ಇತ್ತು...
ಬಸ್ ಸ್ಟಾಂಡ್ ಅಲ್ವಾ ಬಸ್ ಗಳದ್ದೇ ಗಲಭೆ , ಪ್ರಯಾಣಿಕರ ಗಡಿಬಿಡಿ, ಕೆಲವರು ಮನೆಗೆ ಹೋಗುವ ಖುಷಿಲಿ ಇದ್ರೆ ,ಇನ್ನ ಕೆಲವರಲ್ಲಿ ಮನೆ ಬಿಟ್ಟು ಹೋಗುವ ಬೇಜಾರು...
ಎಷ್ಟೋ ಸಂಬಂಧಗಳು ಒಂದಾದ್ರೆ ಅದೆಷ್ಟೋ ಸಂಬಂಧಗಳು ನುಚ್ಚು ನೂರಾಗುವ ವೇದಿಕೆ...
ಓದು ಮುಗಿಸಿ ಬಂದ ಮಕ್ಕಳು ಎಂದು ಹೆಮ್ಮೆ ಯಿಂದ ಸ್ವಾಗತಿಸುವ ಪೋಷಕರು ಒಂದೆಡೆಯಾದರೆ ,,ಓದಿಗಾಗಿ ಉದ್ಯೋಗಕ್ಕಾಗಿ ಕುಟುಂಬ ತೊರೆಯುತ್ತಿರುವವರು ಒಂದೆಡೆ..
ಜಗಳವಾಡಿ ತವರು ಮನೆಗೆ ಹೊರಟ ಮಡದಿಯ ಹುಡುಕಿ ಬಸ್ ಗಳನ್ನು ಹೋಗದಿರುವಂತೆ ಕೋರಿ ಕಂಗಾಲಾಗಿರುವ ಒಬ್ಬ ಪತಿಯಾದರೆ, ದಾಂಪತ್ಯ ಜೀವನಕ್ಕೆ ಕಾಲಿಟ್ಟು ತನ್ನ ಊರಿಗೆ ಬಂದ ನವಜೋಡಿಯು ಇನ್ನೊಂದೆಡೆ..
ಇಲ್ಲಿ ಪ್ರತಿದಿನ ದುಡಿಮೆಗೆಂದೇ ಬರುವ ಅದೆಷ್ಟೋ ಅಸಹಾಯಕ ಜೀವಗಳು, ಶಾಲಾ ಕಾಲೇಜಿನ ಕಾರಣದಿಂದ ಪ್ರತಿದಿನ ಸಮಯಪ್ರಙ್ಞ ಇಲ್ಲದಿರುವ ಬಸ್ ಗಳಿಗೆ ಶಪಿಸುತ್ತಿರುವ ವಿದ್ಯಾರ್ಥಿಗಳು,, ದೇವರಿಗಿಂತ ಹೆಚ್ಚಾಗಿ ಬಸ್ ಗಳನ್ನೇ ನಂಬಿ ಬದುಕು ದೂಡುವ ಅದೆಷ್ಟೋ ಡ್ರೈವರ್ ,ಕಂಡಕ್ಟರ್ ಗಳು ,,,
ಬಂದ ದಾರಿಯಲ್ಲಿ ಬಸ್ ಹತ್ತಿ ಹೋಗದೆ ಹೀಗೆಲ್ಲಾ ಯೋಚಿಸುತ್ತಾ ಹೋಗಬೇಕಿರುವ ಬಸ್ ಗೆ ಬೀಳ್ಕೊಡುಗೆ ನೀಡುತ್ತಿರುವ ನನ್ನಂತ ವಿಚಿತ್ರ ಮಾನವ ಜೀವಿಗಳು.......
ಅಬ್ಬಾ ಬದುಕಿನ ಪಾಠ ಕಲಿಬೇಕು ಅಂದರೆ ಒಂದರ್ಧ ಗಂಟೆ ಬಸ್ ಸ್ಟಾಂಡ್ ಅಲ್ಲಿ ಕುಳಿತರೆ ಸಾಕಲ್ಲವೇ....
ಕಣ್ಣಿಲ್ಲದಿದ್ದರೂ ಖುಷಿಯಿಂದ ಹಾಡಿ ಒಂದೆರಡು ಕಾಸಲ್ಲಿ ನಗುವಿನೊಂದಿಗೆ ಬದುಕು ನಡೆಸುವವರಿಂದ ಹಿಡಿದು ಐರಾವತ ಅನ್ನೋ ಐಷಾರಾಮಿ ಬಸ್ ಇಂದ ಪಾದ ಭೂಮಿಗಿಳಿದ ತಕ್ಷಣ "oh my god it's too hot " ಎಂದು ಮೂತಿ ಮುರಿಯುವವರ ವರೆಗೆ ಎಲ್ಲಾ ವರ್ಗದ ಜನರೂ ಕಾಣಸಿಗುವ ಏಕೈಕ ಸ್ಥಳ....
"Don't go there it's not clean " ಎಂದು ಸಿಡುಕು ಮೂತಿಯಿಂದ ಮಗುವಿಗೆ ಗದರುತ್ತಿರುವ educated mother ಮುಂದೆ ಕೆಳಗೆ ಬಿದ್ದ ಬನ್ ಪೀಸ್ ಎತ್ತಿ ಚಿನ್ನವೇ ಸಿಕ್ಕಿತೆಂಬ ಭಾವದಲ್ಲಿ ತನ್ನ ಮಗುವಿನ ಬಾಯಿಗಿಟ್ಟು ಮುಗುಳು ನಕ್ಕ ಮಹಾತಾಯಿ....
ಇವರೆಲ್ಲರ ನಡುವೆ ನನ್ನ ಕೂಗು ಯಾರಿಗೂ ಕೇಳುತ್ತಿಲ್ಲವೇ?? ಅಥವಾ ಕೇಳಿಯೂ ಕೇಳದಂತೆ ತಿರಸ್ಕರಿಸಿ ಹೋಗುತ್ತಿರುವರೇ???
ಈ ಪ್ರಪಂಚ ಸರಿಯಿಲ್ಲವೆಂದೇ ನಾನು ಹುಟ್ಟಿದ ದಿನವೇ ಅಳುತ್ತಾ ಈ ಭೂಮಿಗೆ ಬಂದದ್ದು ಆಗ ನಿನ್ನೊಂದಿಗೆ ನಾನಿರುವೆಂದು ಸಲಹಿದ ಕೈಗಳು ನನ್ನ ತಾಯಿದು ಮಾತ್ರ ಈಗ ಅವಳೇ ಎಲ್ಲಿ ಕಾಣೆಯಾದಳು ಎಂಬಂತೆ ಮಗುವೊಂದು ನೆಲದಲ್ಲಿ ಕುಳಿತು ಚೀರಿ ಅಳುತಿತ್ತು.....
ಕಿಟಕಿ ಬದಿಯಲ್ಲಿ ಸಾಯಲು ದಾರಿ ಹುಡುಕುತ್ತಿದ್ದ ನನ್ನ ಚಿತ್ತವನ್ನು ಬಡಿದೆಬ್ಬಿಸಿದ್ದೆ ಆ ಅಳುವಿನ ಧ್ವನಿ.....
ಸುಮಾರು ಒಂದೂವರೆ ವರ್ಷದ ಮಗು ಒಂದೇ ಸಮನೆ ಅಳುತ್ತಿತ್ತು, ಮುದ್ದಾದ ಕೆನ್ನೆ ಮೇಲೆ ಕಣ್ಣೀರ ಕಲೆ ಮಗು ತುಂಬಾ ಹೊತ್ತಿಂದ ಅಳುತ್ತಿರುವುದ ಸಾರಿ ಹೇಳುತ್ತಿದ್ದರೂ ಯಾರಿಗೂ ಕೇಳುವ ಪುರುಸೊತ್ತಿರಲಿಲ್ಲ,,
ಧರಿಸಿದ ಹಳೆಯ ಬಟ್ಟೆಯು ತಾನು ಬಣ್ಣ ಮಾಸಿರುವುದ ಪ್ರತಿಬಿಂಬಿಸಿ ಮಗುವು ಸ್ನಾನ ಮಾಡಿ ಎಷ್ಟೋ ವಾರಗಳೇ ಕಳೆದಿದೆ ಎಂಬುದನ್ನು ಚಿತ್ರಿಸುತ್ತಿತ್ತು, ಕೃಷ್ಣನ ಮಣ್ಣು ತಿಂದ ಕಲೆಯಂತೆ ಮುಖದಲ್ಲಿ ಮುಗ್ಧತೆಯೊಂದಿಗೆ ಯಾವುದೋ ತಿಂಡಿಯ ಕಲೆ ಮಾಸಿತ್ತು,,, ಕೃಷ್ಣ ಹೆಜ್ಜೆಗಳನು ಇಡಲೆಂದೋ ಏನೋ ಪಾದಗಳೆಲ್ಲ ಕಪ್ಪು ಕಲೆಗಟ್ಟಿದ್ದವು ಒಂದು ಕೈ ,ತೊಟ್ಟ ಹಸಿರು ಅಂಗಿಯನ್ನು ಬಾಯಿನೊಳಗೆ ತುರುಕಿ ಅಳುವ ಧ್ವನಿಯ ತಗ್ಗಿಸಿದರೆ ಇನ್ನೊಂದು ಕೈ ಮೇಲೆತ್ತಿ ಅಮ್ಮನಿಗೆ ತನ್ನ ನು ಅಪ್ಪುವಂತೆ ಕರೆದಂತಿತ್ತು...
ಇಷ್ಟೆಲ್ಲಾ ಯೋಚಿಸುವಷ್ಟರಲಿ ಸುಮಾರು ಹತ್ತು ನಿಮಿಷಗಳೇ ಕಳೆದಿತ್ತು ಯಾರಾದರೂ ಬಂದು ಮಗುವನ್ನು ಕರೆದೊಯ್ಯ ಬಹುದೇನೋ ಎಂದು ಯೋಚಿಸುತ್ತಿದ್ದವಳಿಗೆ ಮಗುವನ್ನು ಒಮ್ಮೆ ಮಾತನಾಡಿಸಬೇಕು ಎಂದು ಅನಿಸುತ್ತಿತ್ತು....
ಇಂತ ವಿಚಿತ್ರ ಕೇಸುಗಳ ಜಾಡು ಹಿಡಿದು ಹೋಗೋದ್ರಲ್ಲಿ ನಾನು ಸ್ವಲ್ಪ ಮುಂದು...
ಅಲ್ಲೇ ಇದ್ದ ಅಂಗಡಿಯಲ್ಲಿ ಒಂದು Good day ಬಿಸ್ಕೆಟ್ ತಗೊಂಡು ಭಯದಲ್ಲೇ ಮಗು ಹತ್ತಿರ ಹೋದೆ ,ಬಿಸ್ಕೆಟ್ ಪ್ಯಾಕ್ ಇಸ್ಕೊಂಡಿದ್ದು ಖುಷಿ ಆದರೂ ಅಳು ಇನ್ನೂ ನಿಲ್ಲಿಸಿಲ್ಲ ಅನ್ನೋ ಬೇಜಾರಿತ್ತು...
"ಅಳಬೇಡ ಪುಟ್ಟ ಅಮ್ಮ ಎಲ್ಲಿ ಯಾಕ್ ಒಬ್ಬನೇ ಅಳ್ತಿದೀಯಾ?"ಅಂತ ಕೇಳ್ತಾ ಇದ್ದೋಳಿಗೆ
"ಮಹಾರಾಣಿ ಕೇಳ್ತಾ ಇದಾಳೆ ಹೇಳಪ್ಪ " ಅನ್ನೋ ಅಪರಿಚಿತ ಧ್ವನಿ ಕೇಳಿ ಭಯ ಆಯ್ತು. ಹಿಂತಿರುಗಿ ನೋಡಿದ್ರೆ ಯಾವುದೋ ಹುಡುಗ .
"ಗೊತ್ತಾಗಲ್ವೇನ್ರೀ ಮಗುನ ಬಿಟ್ಟು ಹೋಗಿದೀರಲ್ಲ ಜವಾಬ್ದಾರಿ ಇಲ್ವಾ ನಿಮಗೆ " ಅಂದಿದ್ದೆ ಜೀವ ಹೋದ ಅನುಭವ .ಇರಲಾರದೆ ಇರುವೆ ಬಿಟ್ಟುಕೊಳ್ಳೋದು ಇದೇ ಇರಬೇಕು ಅನ್ಕೊಂಡು situation explain ಮಾಡೋಣ ಅಂತ ಮಾತು ಶುರುಮಾಡೋ ಮುಂಚೆ
"ಜವಾಬ್ದಾರಿ ಇಲ್ವ ಹಿಂಗಾ ಒಂಟಿ ಮಗುನ ಬಿಟ್ ಹೋಗೋದು ನೋಡೋಕೆ educated ತರ ಕಾಣ್ತೀರ ಕರಕೊಂಡೋಗಿ ಫಸ್ಟ್ ಪಾಪ ಮಗು ಅಳ್ತಿದೆ "
ನಾವು ಹುಡುಗೀರು ಅಳುವುದರಲ್ಲಿ ಸಕ್ಕತ್ ಫಾಸ್ಟ್ ಸಮಯ ಸಂದರ್ಭ ನೋಡಲ್ಲ ಒಂಚೂರು ಯಾರದರೂ ಗದರಿದರೆ ಸಮುದ್ರ ಸೇರಕ್ ಹೋಗ್ತಿರೋ ನದಿ ತರ ಧಾರಾಕಾರವಾಗಿ ಕಣ್ಣೀರು ಹರಿತಿರುತ್ತೆ....
and it works every time 😉....
ಕಣ್ಣೀರು ನೋಡಿ ಹುಡುಗ ಪ್ಲೇಟ್ ಚೇಂಜ್ ಮಾಡ್ ಬಿಡೋದಾ...
"ಅಂತ ಜನ ನಿಮಗೆ ಹೇಳ್ತಾರೆ ಅಂತ ಹೇಳಕ್ ಬಂದೆ ಅಷ್ಟುಕ್ಕೇ ಅಳ್ತ ಇದೀರಾ..."
"ಏನು ಮಕ್ಕಳು ಕಳ್ಳರ ನೀವು? ಮುಂಚೆ ಚಾಕಲೇಟ್ ಕೊಟ್ಟು ಕಿಡ್ ನಾಪ್ ಮಾಡ್ತಿದ್ರು ನೀವು ಹೊಸ ದಾಗಿ ಗುಡ್ ಡೇ ಬಿಸ್ಕೆಟ್ ಕೊಟ್ಟು ಕಿಡ್ ನಾಪ್ ಮಾಡೋ ಪ್ಲಾನ್ ಆಆ "
"ಸರ್ ಇಲ್ಲ ಸರ್ ಮಗು ಅಳ್ತಿತ್ತು ಅಂತ ..."
ಅಷ್ಟರಲ್ಲಿ ಸುಮಾರು ಹದಿನೆಂಟು ವರ್ಷದ ಹುಡುಗಿ ಕೈಯಲ್ಲಿ ಏನೋ ಪೇಪರ್ ಪೊಟ್ಟಣ ಹಿಡಿದು ನಮ್ಮ ಕಡೆಗೆ ಬಂದು, ಸೀದ ಹೋಗಿ ಮಗು ಕಣ್ಣೊರೆಸಿ ಪೊಟ್ಟಣ ತೆಗೆದು ಎಷ್ಟೋ ಸೂರ್ಯೋದಯ ನೋಡಿದ್ದ ಬನ್ ಮುರಿದು ಮಗುಗೆ ತಿನ್ನೋಕೆ ಕೊಟ್ಳು ,,
ಯಾಕೋ ಗೊತ್ತಿಲ್ಲ ಅವಳ ಬಗ್ಗೆ ತಿಳ್ಕೋಬೇಕು ಅನ್ನೋ ಕುತೂಹಲನೋ , ಕಾಳಜಿನೋ, ಒಂಟಿ ಹೆಣ್ಣು ಎಂಬ ಕರುಣೆಯೋ ಗೊತ್ತಿಲ್ಲ,,ಅವಳ ಬಗ್ಗೆ ವಿಶೇಷ ಕಾಳಜಿ ನನಗಿತ್ತು...ಬಿಸ್ಕೆಟ್ ಕೊಟ್ಟೆ,
"ನಿಮ್ಮ ಹೆಸರೇನು??" ಅಂತ ಮೆಲುವಾಗಿ ಕೇಳಿದೆ
ಉತ್ತರ ಸಿಗಲಿಲ್ಲ. .
"ನಿಮ್ಮ ಊರು ಯಾವುದು?"
ಊಹುಂ ಉತ್ತರ ಇಲ್ಲ...
" ಈ ಮಗು ನಿಮ್ಮದೇನಾ?"ಅಂತ ಮಗು ಹತ್ರ ಕೈ ತೋರಿಸಿದ್ ತಕ್ಷಣ ಹೆದರಿದವಳಂತೆ ಮಗುವನ್ನು ಗಟ್ಟಿಯಾಗಿ ತಬ್ಬಿ ಹಿಂದೆ ಸರಿದಳು..
ಆ ಹುಡುಗ ನಿಮ್ಮ ಮನೆ ಎಲ್ಲಿ ಅಂತ ಸನ್ನೆ ಮಾಡಿ ಕೇಳಿದಾಗ ಅವಳ ಮುಖದಲ್ಲಿ ಭಯ ಇತ್ತು ..
"ನೀನಿಲ್ಲಿರೋದು ಸೇಫ್ ಅಲ್ಲ" ಅಂದೆ.
ಹತ್ತಿರ ಹೋಗಿ ಸನ್ನೆ ಮಾಡಿ ಕೇಳಿದಾಗ ಹರಸಾಹಸ ಪಟ್ಟು ಒಂದೇ ಒಂದು ಪದ ಹೇಳಿದ್ದು ಅವಳು "ರೊಕ್ಕಿಲ್ಲ ರೀ" ಅಂತ
ದುರಾದೃಷ್ಟನೋ ಏನೋ ನನ್ ಹತ್ರನೂ ಅವತ್ತು ದುಡ್ಡಿರಲಿಲ್ಲ ,
ಆದ್ರೂ 280rs ಇತ್ತು ಅದನ್ನ ಅವಳ ಕೈ ಅಲ್ಲಿಟ್ಟು "ನಾಳೆ ಬರ್ತೀನಿ ಇಲ್ಲೇ ಇರು ದುಡ್ ಕೊಡ್ತೀನಿ "ಅಂತ ಹೇಳಿ ಮನೆಗೆ ಬಂದೆ....
ಸಾಯೋ ನಿರ್ಧಾರ ಮಾಡಿದ್ದೋಳು ಸಾಯ್ತಿದ್ನೋ ಇಲ್ವೋ ಗೊತ್ತಿಲ್ಲ ಆದರೆ ನಾಳೆ ಬರ್ತೀನಿ ದುಡ್ಡು ತರ್ತೀನಿ ಅಂತ ಹೇಳಿದ್ ಮಾತಿಂದ ಸಾಯೋ ಯೋಚನೆ ಕೂಡ ಮಾಡ್ಲಿಲ್ಲ...
ಮಾರನೇ ದಿನ ಬ್ಯಾಂಕ್ ಅಲ್ಲಿ ದುಡ್ಡು ಬಿಡಿಸಿ 2000 rs ತಗೊಂಡು ಬಸ್ ಸ್ಟಾಂಡ್ ಎಲ್ಲಾ ಹುಡುಕಿದರೂ ಆ ಹುಡುಗಿ ಸಿಗಲೇ ಇಲ್ಲ, 89 % ಚಾರ್ಜ್ ಇಂದ ೦% ಆಗಿ ಮೊಬೈಲ್ ಸ್ವಿಚ್ ಆಫ್ ಆಗೋ ವರೆಗೆ ಕಾದೆ ಅವಳು ಬರಲೇ ಇಲ್ಲ...
ಯಾವುದೇ ಮಗು ಅಳ್ತಿರೋ ಧ್ವನಿ ಕೇಳಿದರೆ ಅವಳೇ ಏನೋ ಅಂತ ನೋಡ್ತಿದ್ದೆ ಆದರೆ ಮತ್ತೆ ಅವಳು ನಂಗೆ ಸಿಗಲೇ ಇಲ್ಲ ,,, ಆ ದುಡ್ಡು ಅವಳಿಗೆ ಅಂತನೇ ಎತ್ತಿಟ್ಟದೀನಿ..
ನಿನ್ನೆ ಬಸ್ ಸ್ಟಾಂಡ್ ಅಲ್ಲಿ ಯಾರೋ "ಓಯ್ ಗುಡ್ ಡೇ ಬಿಸ್ಕೆಟ್ "ಅಂತ ಕೂಗಿದರು ಪರಿಚಿತ ಧ್ವನಿ ಅನಿಸಿತ್ತು.
ಅದೇ ಹುಡುಗ , "ಆ ಹುಡುಗಿ ಬಗ್ಗೆ ಏನಾದರೂ ಗೊತ್ತಾಯ್ತಾ , ನಾನು ಅವತ್ತು 500rs ಕೊಟ್ಟು ಊಟ ಕೊಡಿಸಿ ಹೋದೆ "ಅಂದ. ಮತ್ತೆ ಅವತ್ತಿನ ದಿನ ನೆನಪಾಯ್ತು, ಅವಳಿಗಾಗಿ ಎತ್ತಿಟ್ಟ ಹಣವು ಅವಳಿಗಾಗೇ ಕಾದಿತ್ತು..
ಈ ಸ್ವಾರ್ಥ ಪ್ರಪಂಚದಲ್ಲಿ ಸಿಗುವುದಿಲ್ಲ ಸ್ವಾತಂತ್ರ್ಯ ..
ಒಂಟಿ ಹೆಣ್ಣಿನ ಬದುಕೆಂಬುದು ಇಲ್ಲಿ ಅಸಾಧ್ಯ...
ವೀರ ವನಿತೆಯರು ಜನಿಸಿದ ನಾಡಿದು ,,
ನಿನ್ನ ತನವ ಕಾಪಾಡುವ ಹೊಣೆ ನಿನ್ನದು..
ನನ್ನ ಸಾವಿನ ಯೋಚನೆಯ ಕೊಂದವಳು ನೀನು...
ಸಮಾಜದ ಭೂತಗಳನು ಕೊಲ್ಲುವ ಶಕ್ತಿಯು ನಿನ್ನಲ್ಲಿರಬಹುದೇನು..
ಯಾವ ಹೆಣ್ಣು ಅಶಕ್ತಳಲ್ಲ ,
ಭರತಖಂಡವಿದು ಇಲ್ಲಿ ಜನಿಸಿದ ಸ್ತ್ರೀ ಅಬಲೆಯಲ್ಲ....
-ಸುಪ್ತಾ
Comments
Post a Comment