ನನ್ನಿಂದ ನನಗೊಂದು ಪತ್ರ...

 

ಕನ್ನಡಿ ಬರೆದ  ಪತ್ರ....
                
      .......... ಅಲರಾಮ್ ಅಂತೂ ಬೆಳಗಿನ ಕನಸೆಲ್ಲಾ ಹಾಳು ಮಾಡಿ ಒಂದೇ ಸಮ ಹೊಡೆದು ಕೊಳ್ಳುತ್ತಿತ್ತು, ಅಲರಾಮ್ ಹೊಡೆದ ತಕ್ಷಣ ಎದ್ದೇಳೋ ಜಾಯಮಾನನೇ ಅಲ್ಲ ನಮ್ದು.  ಹತ್ತು ನಿಮಿಷ ಟೈಮ್ ತಗೊಂಡು ಕಷ್ಟಪಟ್ಟು ಕಣ್ಣು ತೆರೆದಾಗ ಕಿಟಕಿಯಿಂದ ತೂರಿ ನುಸುಳಿದ್ದ ನೇಸರನ ಕಿರಣಗಳು ನಾನು ನಿನಗಿಂತ ಮುಂಚೆ ಎದ್ದಿಲ್ವಾ ಅಂತ ಕೇಳ್ತಾ ಇರೋ ಹಾಗಿತ್ತು.
ಅಮ್ಮ ಹೇಳ್ಕೊಟ್ಟಂಗೆ ಕೈ ರೇಖೆ ನೋಡಿ ನಮ್ ಗಣಪಂಗೆ ಒಂದ್ ಗುಡ್ ಮಾರ್ನಿಂಗ್ ಹೇಳಿ ಸೀದ ಹೋಗಿ  ಬ್ರಶ್ ಗೂ ಟೂತ್ ಪೇಸ್ಟ್ ಗೂ ಕೆಲಸ ಕೊಟ್ಟು ರೂಮ್ ಅಲ್ಲಿ ಹೇರ್ ಕ್ಲಿಪ್ ಹುಡುಕ್ತಾ ಇದ್ದೆ . ಕನ್ನಡಿಯ ಕೆಳಗಿನಂಚಿನಲ್ಲಿ ಹೇರ್ ಕ್ಲಿಪ್ ಇರೋದು ಆಶ್ಚರ್ಯ ಆಗಿಲ್ಲ ಅಂದ್ರು ಅದರಲ್ಲಿ ಸಿಕ್ಕಿಸಿದ ವೈಟ್ ಲೆಟರ್ ನೋಡಿ ಯಾರಿಟ್ಟಿರೋದು ಅಂತ ಆಶ್ಚರ್ಯ ಆಯ್ತು . ಬಡ್ಡಿ ಮಗಂದ್ ಮನಸ್ಸು ಯಾರಾದ್ರೂ ಲವ್ ಲೆಟರ್ ಇಟ್ಟಿರ್ಬೋದ  ಅಂತ ಕೇಳ್ತಿದ್ರೆ ಮೆದುಳು ಇದು ಓವರ್ ಫೀಲಿಂಗ್ ಅಂತ ನಗ್ತಾ ಇತ್ತು. ಕ್ಯುರಿಯಾಸಿಟಿಲೇ ಲೆಟರ್ ಓಪನ್ ಮಾಡ್ದೆ.....

           ಹಲೋ ಗುಡ್ ಮಾರ್ನಿಂಗ್,
ಯಾರಿದು ಅಂತ ಯೋಚನೆ ಮಾಡ್ತಾ ಇದೀಯಾ? ನಿನ್ನ ರೂಮ್ ಲ್ಲಿ ತುಂಬಾ ವರ್ಷಗಳಿಂದ ಇರೋ ಕನ್ನಡಿ ನಾನು. ನನ್ನಲ್ಲಿ ಯಾವಾಗಲೂ ಬರೀ ನಿನ್ನ ಬಿಂಬನೇ ಕಾಣೋದು ಅಲ್ವಾ ನಾನು ನೀನೇ ಅಂತ ಹೇಳ್ಬೋದಲ್ವಾ . ನಿನ್ನೆ ಸಂಜೆ ಕಾಲೇಜಿಂದ ಬಂದು ನನ್ನ ಮುಂದೆ ನಿಂತು ಸಪ್ಪೆ ಮೋರೆಹಾಕೊಂಡು "ನಾನು ನೋಡಕ್ ಚೆನ್ನಾಗಿಲ್ಲ ಅಲ್ವಾ? ಛೇ ನಿನ್ನ ಕೇಳ್ತಾ ಇದೀನಲ್ಲ  ನಿಂಗೇನಾದರೂ ಬಾಯಿ ಇದೀಯಾ? ಏನ್ ಕೇಳಿದ್ರು ವೇಸ್ಟ್" ಅಂತ ಹೇಳ್ದಾಗ ನಿನ್ನ ಕಣ್ಣಲ್ಲಿ ನೀರಿತ್ತು ಅಂತ ಗೊತ್ತು, ಆ ಪ್ರೆಶ್ನೆಗೆ ಉತ್ತರ ಹೇಳ್ಬೇಕು ಅಂತ ಈ ಪತ್ರ ಬರೀತಾ ಇದೀನಿ.....
           ದಿನ ಬೆಳಿಗ್ಗೆ ಕಾಲೇಜಿಗೆ ರೆಡಿ ಆಗಿ ಟೈಮ್ ಆದ್ರೂ  ಹೊರಟಾಗ ನನ್ನ ಮುಂದೆ ನಿಂತು ಒಂದ್ ಸೈಲ್ ಕೊಟ್ಟು ಅಯ್ಯೋ ಇವತ್ತು ಲೇಟ್ ಆಯ್ತಲ್ಲಪ್ಪಾ ಅಂತ ಓಡ್ತಿಯಲ್ಲಾ, ಎಷ್ಟು ಚೆನ್ನಾಗಿ ಕಾಣ್ತಾ ಇರ್ತಿಯಾ ಗೊತ್ತಾ?  ಅಮ್ಮ ಏನಾದರೂ ಬೈತಾ ಇದ್ರೆ ನನ್ನ ಮುಂದೆ ನಿಂತು ಫಿಲ್ಮ್  ಡೈಲಾಗ್ ಹೊಡಿತಾ ಇದ್ರೆ  ಯಾವ ಹಿರೋಯಿನ್ ಗೂ ಕಮ್ಮಿ ಇಲ್ಲ ಇವಳು ಡೈಲಾಗ್ ಹೇಳೋದ್ರಲ್ಲಿ ಅನ್ಸುತ್ತೆ.ಯಾವತ್ತಾದರೂ ಖುಷಿ ಆಗಿದ್ದಾಗ ನಿನ್ ಫೇವರಿಟ್ ಸಾಂಗ್ ಹಾಕೊಂಡ್ ಸ್ಟೆಪ್ ಹಾಕ್ತಾ ಇರ್ತಿಯಲ್ಲ ಆಗ ನೆಕ್ಸ್ಟ್ ಡಾನ್ಸ್ ಕರ್ನಾಟಕ ಡಾನ್ಸ್ ಗೆ ಕಳ್ಸೋದೆ ಅಂತ ನಿನ್ನ ಖುಷಿ ನೋಡಿ ನಂಗೂ ಖುಷಿ ಆಗುತ್ತೆ. ಮಧ್ಯರಾತ್ರಿಲಿ  ಒಂದಿನ ಫ್ರಿಡ್ಜ್ ಇಂದ ಐಸ್ ಕ್ರೀಮ್ ತಂದು ತಿನ್ನೋವಾಗ ಕ್ಯೂಟ್ ಕಳ್ಳಿ ತರ ಕಾಣ್ತಾ ಇದ್ದೆ. ಮೊನ್ನೆ ಹಬ್ಬದಿನ ಅಮ್ಮನ ಆರೆಂಜ್ ಕಲರ್ ಸೀರೆ ಉಟ್ಟು "ಹೆಂಗ್ ಕಾಣ್ತಾ ಇದೀನಿ? ಸೂಪರ್ ಆಗ್ ಕಾಣ್ತಿದೀನಿ ಅಲ್ವಾ "ಅಂತ ಕಣ್ಣು ಮಿಟುಕಿಸಿ ನಾಚಿಕೆಲಿ ಕೇಳ್ದಾಗ   ಮುದ್ದಾಗಿದಿಯಾ ಅಂತ ಹೇಳೋಕೆ ಬಾಯಿಲ್ವಲ್ಲಾ ಅಂತ ಬೇಜಾರಾಗ್ತ ಇತ್ತು. ಯಾರೋ ಏನಾದರೂ ಬೈದಾಗ ವಾಪಸ್ ಮಾತಾಡದೆ ಒಬ್ಬಳೇ ಅಳ್ತಾ ಕೂತಾಗ ಸಣ್ಣ ಮಗು ಮನಸ್ಸು ನಿಂದು ಅನಿಸೋದು ಸುಳ್ಳಲ್ಲ. ಎಲ್ಲ ಜಂಜಾಟಗಳನ್ನು ಮರೆತು ಗೊಂಬೆ ತಬ್ಬಿಕೊಂಡು ಮಗುತರ ಮಲಗೀರ್ತೀಯಲ್ಲ ಫೇರಿಟೇಲ್ ಸ್ಲೀಪಿಂಗ್ ಬ್ಯೂಟಿ ತರ ಕಾಣ್ತೀಯ......
       ಹೇಳ್ತಾ ಹೋದ್ರೆ ಇನ್ನೂ ಸಾಕಷ್ಟು ಇದೆ  , ಆದರೆ ನೀನು ಮಾತ್ರ ಯಾವಗಲೂ ನಾನು ನೋಡೋಕೆ ಚೆನ್ನಾಗಿಲ್ಲ ಅಂತ ನಿನ್ನ ನೀನು criticize ಮಾಡ್ಕೊಳೋದ್ರಲ್ಲಿ ಅರ್ಥನೇ ಇಲ್ಲ . ನಾನು ನಿನ್ನ ಮಾತ್ರ ನೋಡ್ತೀನಿ ನಿನ್ನ ಬೇರೆ ಅವರ ಜೊತೆ compare ಮಾಡಲ್ಲ, ಅದಕ್ಕೆ ನೀನು ಯಾವಾಗಲೂ ನನಗೆ ಮುದ್ದಾಗೇ ಕಾಣ್ತೀಯ ಆದ್ರೆ ನೀನು ಯಾವತ್ತೂ ನಿನ್ನ ಬೇರೆ ಅವರಿಗೆ ಹೋಲಿಕೆ ಮಾಡ್ತೀಯೋ ಆಗ ನೀನು ನಿಂಗೆ ಇಷ್ಟ ಆಗಲ್ಲ. ಮೊದಲು ನಿನ್ನನ್ನು ನೀನು ಇಷ್ಟ ಪಡಬೇಕು, ಪ್ರೀತಿಸಬೇಕು ಆಗ ಬೇರೆಯವರಿಗೆ ನಿನ್ನ ಮೇಲೆ ಇರೋ opinion  ನಿನ್ನ ಕುಗ್ಗಿಸೋಕೆ ಆಗಲ್ಲ.ಯಾವಾಗ ಎಲ್ಲಾ ಕೀಳರಿಮೆ ಬಿಟ್ಟು ನೀನು ನೀನಾಗಿ ನಿಷ್ಕಲ್ಮಶವಾಗಿ ನಗ್ತೀಯೋ ಆಗ ನೀನು ಎಲ್ಲರಿಗಿಂತ ಸುಂದರ...
you are always beautiful in your own way....
you are enough to the world of yours...
feel proud to be yourself......

-ಇಂತಿ ,
ನೀನು

ಅವತ್ತಿಂದ ಪ್ರತಿ ದಿನ ಹೊಸದಿನ ಅನ್ಸೋಕೆ ಶುರು ಆಯ್ತು . ಪ್ರಪಂಚ ತುಂಬಾ ಸುಂದರವಾಗಿದೆ ಅಂತ ಅನ್ಸೋಕೆ ಕಾರಣ ಆ ಪತ್ರ. ಪ್ರತಿ ಕನ್ನಡಿನೂ ತನ್ನವರಿಗೆ ಇಂತಹ ಒಂದು ಪತ್ರ ಬರೆದಿರುತ್ತೆ, ಇದೇ ಮಾತುಗಳನ್ನು ಹೇಳೋಕೆ ಪ್ರಯತ್ನ ಪಡ್ತಾ ಇರುತ್ತೆ. ಒಮ್ಮೆ ಕನ್ನಡಿಯ ಮಾತಿಗೂ ಕಿವಿಕೊಟ್ಟು ಕೇಳಿ, ನಿಮ್ಮ ಬಿಂಬ ನಿಮಗೂ ಒಂದು ಪತ್ರ ಬರೆದಿರುತ್ತೆ....
ನನ್ನಿಂದ ನನಗೊಂದು ಪತ್ರ ಸಿಕ್ಕ ಹಾಗೆ....

Every person is beautiful in their own way......

-...ಸುಪ್ತಾ

 


Comments

Popular posts from this blog

ಬಸ್ ಸ್ಟಾಂಡ್...