Posts

Showing posts from April, 2021

ನನ್ನಿಂದ ನನಗೊಂದು ಪತ್ರ...

  ಕನ್ನಡಿ ಬರೆದ  ಪತ್ರ....                        .......... ಅಲರಾಮ್ ಅಂತೂ ಬೆಳಗಿನ ಕನಸೆಲ್ಲಾ ಹಾಳು ಮಾಡಿ ಒಂದೇ ಸಮ ಹೊಡೆದು ಕೊಳ್ಳುತ್ತಿತ್ತು, ಅಲರಾಮ್ ಹೊಡೆದ ತಕ್ಷಣ ಎದ್ದೇಳೋ ಜಾಯಮಾನನೇ ಅಲ್ಲ ನಮ್ದು.  ಹತ್ತು ನಿಮಿಷ ಟೈಮ್ ತಗೊಂಡು ಕಷ್ಟಪಟ್ಟು ಕಣ್ಣು ತೆರೆದಾಗ ಕಿಟಕಿಯಿಂದ ತೂರಿ ನುಸುಳಿದ್ದ ನೇಸರನ ಕಿರಣಗಳು ನಾನು ನಿನಗಿಂತ ಮುಂಚೆ ಎದ್ದಿಲ್ವಾ ಅಂತ ಕೇಳ್ತಾ ಇರೋ ಹಾಗಿತ್ತು. ಅಮ್ಮ ಹೇಳ್ಕೊಟ್ಟಂಗೆ ಕೈ ರೇಖೆ ನೋಡಿ ನಮ್ ಗಣಪಂಗೆ ಒಂದ್ ಗುಡ್ ಮಾರ್ನಿಂಗ್ ಹೇಳಿ ಸೀದ ಹೋಗಿ  ಬ್ರಶ್ ಗೂ ಟೂತ್ ಪೇಸ್ಟ್ ಗೂ ಕೆಲಸ ಕೊಟ್ಟು ರೂಮ್ ಅಲ್ಲಿ ಹೇರ್ ಕ್ಲಿಪ್ ಹುಡುಕ್ತಾ ಇದ್ದೆ . ಕನ್ನಡಿಯ ಕೆಳಗಿನಂಚಿನಲ್ಲಿ ಹೇರ್ ಕ್ಲಿಪ್ ಇರೋದು ಆಶ್ಚರ್ಯ ಆಗಿಲ್ಲ ಅಂದ್ರು ಅದರಲ್ಲಿ ಸಿಕ್ಕಿಸಿದ ವೈಟ್ ಲೆಟರ್ ನೋಡಿ ಯಾರಿಟ್ಟಿರೋದು ಅಂತ ಆಶ್ಚರ್ಯ ಆಯ್ತು . ಬಡ್ಡಿ ಮಗಂದ್ ಮನಸ್ಸು ಯಾರಾದ್ರೂ ಲವ್ ಲೆಟರ್ ಇಟ್ಟಿರ್ಬೋದ  ಅಂತ ಕೇಳ್ತಿದ್ರೆ ಮೆದುಳು ಇದು ಓವರ್ ಫೀಲಿಂಗ್ ಅಂತ ನಗ್ತಾ ಇತ್ತು. ಕ್ಯುರಿಯಾಸಿಟಿಲೇ ಲೆಟರ್ ಓಪನ್ ಮಾಡ್ದೆ.....            ಹಲೋ ಗುಡ್ ಮಾರ್ನಿಂಗ್, ಯಾರಿದು ಅಂತ ಯೋಚನೆ ಮಾಡ್ತಾ ಇದೀಯಾ? ನಿನ್ನ ರೂಮ...