ಬಸ್ ಸ್ಟಾಂಡ್...
actually ನಾನವತ್ತು ಸಿಕ್ಕಾಪಟ್ಟೆ confusion ಅಲ್ಲಿದ್ದೆ, life ಅಲ್ಲಿ ಮೊಟ್ಟ ಮೊದಲಬಾರಿಗೆ serious ಆಗಿ ಸಾಯಬೇಕು ಅಂತ ಮನಸು ಹಠ ಮಾಡಿದರೂ ಬುದ್ಧಿ ಬದುಕಿನ ಬುದ್ಧಿವಾದ ಹೇಳೋದ್ರಲ್ಲೇ busy ಆಗಿತ್ತು,,, ಆದ್ರೆ, ನನ್ನ ಕಿತಾಪತಿ ಕಣ್ಣುಗಳು ದೃಷ್ಟಿ ಮಾತ್ರ ನಂಗೂ ಇದಕ್ಕೂ ಸಂಬಂಧ ಇಲ್ವೆನೋ ಅನ್ನೋ ಹಾಗೆ ಬಸ್ಸಿನ ಕಿಟಕಿಯಿಂದ ಬಸ್ ಸ್ಟಾಂಡ್ ಪ್ರಪಂಚ ನೋಡ್ತಾ ಕಳೆದು ಹೋಗಿತ್ತೇನೋ ಗೊತ್ತಿಲ್ಲ... ಯಾವಗಲೋ ಓದಿದ್ದ ನೆನಪು ಕಣ್ಣಿಗೂ ಮನಸಿಗೂ ಸಂಬಂಧ ಇದೆ , ಮನಸ್ಸು ಹೇಳೋ ಮಾತುಗಳು ಕಣ್ಣಲ್ಲಿ ಪ್ರತಿಧ್ವನಿಸುತ್ತೆ ಅಂತ,, ಆದ್ರೆ ಏನೋ ಗೊತ್ತಿಲ್ಲ ನನ್ನ ಕಣ್ಣುಗಳು ಮಾತ್ರ ಯಾವತ್ತೂ ನನ್ನ ಮಾತು ಕೇಳೋದೆ ಇಲ್ಲಪ್ಪ.... ಕ್ಲಾಸ್ ಅಲ್ಲಿ ಬೇಡ ಅಂತ ಎಷ್ಟೇ ಬೇಡಿಕೊಂಡರು ನಿದ್ರಾದೇವಿ ಹಿಂದೆ ಓಡೋದು, ಐಸ್ ಕ್ರೀಮ್ ಕಂಡ್ರೆ ಸಾಕು ಐಸ್ ಕ್ರೀಮ್ ಪಾರ್ಲರ್ ಅವನು ಉದ್ಧಾರ ಆಗ್ಲಿ ಅಂತ ಕಾಯ್ತಾ ಇರುತ್ತವೆ ಅಂದ್ರೆ ತಪ್ಪಿಲ್ಲ, ಅಪ್ಪಿ ತಪ್ಪಿ ನಮ್ ಹುಡುಗ ಕಾಣೋದೆ ತಡ ಫಸ್ಟ್ ಟೈಮ್ ಮಗು ಚಂದಮಾಮನ ನೋಡಿದ ಹಾಗೆ ನೋಡೋದು ,, ಅಂತದ್ರಲ್ಲಿ ಸಾಯೋ ನಿರ್ಧಾರ ಬೇರೆ ಮಾಡಿದ್ದೆ ಕೊನೆಯ ದಿನ ಅಂತ ಬಸ್ ಸ್ಟಾಂಡ್ ನ ಗಂಭೀರವಾಗಿ ಗಮನಿಸಿ ಸೀಕ್ರೆಟ್ ಆಗಿ good bye ಹೇಳ್ತಾ ಇತ್ತು... ಬಸ್ ಸ್ಟಾಂಡ್ ಅಲ್ವಾ ಬಸ್ ಗಳದ್ದೇ ಗಲಭೆ , ಪ್ರಯಾಣಿಕರ ಗಡಿಬಿಡಿ, ಕೆಲವರು ಮನೆಗೆ ಹೋಗುವ ಖು...